ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು 

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಅಕ್ಟೋಬರ್ 25 ರಂದು ಬೆಳಿಗ್ಗೆ 8:30 ಗಂಟೆಗೆ ಪಿಲಿಕುಳ ಲೇಕ್ ಗಾರ್ಡನ್‍ನಲ್ಲಿ  ನಡೆಯಲಿದೆ. 

ಬೆಳಿಗ್ಗೆ 8:30 ಗಂಟೆಯಿಂದ ಪಿಲಿಕುಳ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು ಮೀನು ದಾಸ್ತಾನು ಇರುವವರೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಕರ್ನಾಟಕ ಮೀನುಗಾರಿಕಾ ಇಲಾಖೆಯ ವತಿಯಿಂದ ರೋಹು, ಕಾಡ್ಲಾ, ತಿಲೇಪಿಯಾ ಮುಂತಾದ ಮೀನು ಮರಿಗಳನ್ನು ಪಿಲಿಕುಳ ಕೆರೆಗೆ ಬಿಡಲಾಗುತ್ತದೆ. ಮೀನು ಆಹಾರ ಮಳಿಗೆಗಳಲ್ಲಿ ಸ್ಥಳದಲ್ಲೇ ತಯಾರಿಸಿದ ಸಿಹಿನೀರಿನ ಹಾಗೂ ಸಮುದ್ರದ ಮೀನಿನ ಖಾದ್ಯಗಳು ಮತ್ತು ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.