ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ
ಮಣಿಪಾಲ ಸಮೀಪದ NH-169A- ಪರ್ಕಳದ ದೇವಿನಗರದಲ್ಲಿ ನೂತನವಾಗಿ ನಿರ್ಮಿಸಲಾದ ಫುಟ್‌ಪಾತ್‌ನ ಕುಸಿದ ಭಾಗದ ಬಳಿ ಸ್ಥಳೀಯರು ಹೆಲ್ಮೆಟ್ ಇಟ್ಟು ಪಾದಚಾರಿಗಳಿಗೆ ಎಚ್ಚರಿಸಿದ್ದಾರೆ. ಇಲ್ಲಿನ ಪ್ರೌಢಶಾಲೆಯ ಬಳಿ ಇತ್ತೀಚೆಗೆ ರಸ್ತೆ ಅಗಲೀಕರಣದ ಬಳಿಕ ಫುಟ್‌ಪಾತ್ ನಿರ್ಮಿಸಲಾಗಿತ್ತು. ಆದರೆ, ಫುಟ್‌ಪಾತ್‌ನ ಸ್ಲ್ಯಾಬ್ ಕುಸಿದಿದ್ದು, ಹೊಂಡ ನಿರ್ಮಾಣವಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಅಪಾಯ ಎದುರಾಗಿದೆ. ವಿಶೇಷವಾಗಿ, ಮುಂಜಾನೆ ವೇಳೆ ಹಲವು ಹಿರಿಯ ನಾಗರಿಕರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ.
ಪಾದಚಾರಿಗಳು ಆಕಸ್ಮಿಕವಾಗಿ ಹೊಂಡಕ್ಕೆ ಬೀಳುವುದನ್ನು ತಡೆಯಲು ಸ್ಥಳೀಯರು ಕುಸಿದ ಭಾಗದ ಬಳಿ ಹೆಲ್ಮೆಟ್ ಇಟ್ಟು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯುವ ಉದ್ದೇಶವೂ ಇದರಲ್ಲಿದೆ. ಪರ್ಕಳದ ದೇವಿನಗರದಲ್ಲಿರುವ ಪೆಟ್ರೋಲ್ ಪಂಪ್ ಎದುರು ಈ ಕುಸಿದ ಫುಟ್‌ಪಾತ್ ಇದೆ. ಸ್ಥಳೀಯರು ಕೂಡಲೇ ಸ್ಲ್ಯಾಬ್ ದುರಸ್ತಿಪಡಿಸಿ ಪಾದಚಾರಿಗಳ ಸುರಕ್ಷತೆ ಖಚಿತಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಪರ್ಕಳದ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು ಮಾತನಾಡಿ, ಜನರಿಗೆ ಅಪಾಯ ಉಂಟುಮಾಡುವ ಹೊಂಡವನ್ನು ಆದಷ್ಟು ಬೇಗ ಮುಚ್ಚಿ ಸುರಕ್ಷಿತಗೊಳಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವೀಡಿಯೊ ನೋಡಿ