ಭಾರತದ ಚಹಾ ಉದ್ಯಮ ಕ್ಷೇತ್ರವನ್ನು ಆಧುನೀಕರಿಸಲು, ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತೀಯ ಚಹಾ ಬ್ರಾಂಡ್ ಗಳನ್ನು ನಿರ್ಮಿಸಲು ಉಪರಾಷ್ಟ್ರಪತಿ ಕರೆ
ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು
ನೀಲಗಿರಿಯ ಕೂನೂರಿನಲ್ಲಿ ಇಂದು ನಡೆದ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಇದರ ಚಹಾ ಸಂಶೋಧನಾ ಪ್ರತಿಷ್ಠಾನದ ಶತಮಾನೋತ್ಸವ ಸಮ್ಮೇಳನವನ್ನು ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಿದರು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಚಹಾವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಹೆಚ್ಚಿನ ಸಂಶೋಧನೆ, ಆಧುನೀಕರಣ, ಬ್ರ್ಯಾಂಡಿಂಗ್ ಮತ್ತು ಮೌಲ್ಯವರ್ಧನೆಗೆ ಅವರು ಕರೆ ನೀಡಿದರು.
ಉಪರಾಷ್ಟ್ರಪತಿ ಅವರು ಚಹಾ ಉದ್ಯಮ, ತೋಟಗಾರರು ಮತ್ತು ಕಾರ್ಮಿಕರಿಗೆ 100 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಫೌಂಡೇಶನ್ ಸಂಶೋಧನೆ ಮತ್ತು ಚಹಾ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ನೀಡಿದ ಶತಮಾನೋತ್ಸವದ ಕೊಡುಗೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಭಾರತವು ವಿಶ್ವದ ಅತಿದೊಡ್ಡ ಚಹಾ ಉತ್ಪಾದಿಸುವ ಮತ್ತು ಚಹಾ ಸೇವಿಸುವ ದೇಶಗಳಲ್ಲಿ ಒಂದಾಗಿದೆ ಎಂದ ಅವರು, ಚಹಾ ಕೃಷಿ ಮತ್ತು ಪರಿಣಾಮಕಾರಿ ಸಂಸ್ಕರಣೆ ಮತ್ತು ಉತ್ಪಾದನೆ ಎರಡರ ಮೇಲೂ ಗಮನಹರಿಸುವ ಅಗತ್ಯವನ್ನುಅವರು ಒತ್ತಿ ಹೇಳಿದರು.
ಉಪರಾಷ್ಟ್ರಪತಿಯವರು ಚಹಾ ವಲಯದಲ್ಲಿ, ವಿಶೇಷವಾಗಿ ವೆಚ್ಚ-ಪರಿಣಾಮಕಾರಿತ್ವ, ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಸುಧಾರಿಸುವ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ವಿಸ್ತರಿಸಲು ಕರೆ ನೀಡಿದರು. ಜಾಗತಿಕ ಚಹಾ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಎಂದು ಗಮನಿಸಿ, ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಅವಶ್ಯಕತೆಗಳಿಗೆ ಸ್ಪಂದಿಸುವ ಬಗ್ಗೆ ತೋಟಗಾರರಿಗೆ ಶಿಕ್ಷಣ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಜಾಗತಿಕವಾಗಿ, ಇತರ ಚಹಾ ಉತ್ಪಾದಿಸುವ ದೇಶಗಳ ಸ್ಪರ್ಧೆಯನ್ನು ಉಲ್ಲೇಖಿಸಿದ ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು , ಭಾರತವು ತನ್ನ ಚಹಾವನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಬಹುದು, ಆದಾಯವನ್ನು ಸುಧಾರಿಸಬಹುದು ಮತ್ತು ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ತೋಟಗಾರಿಕೆ ವಲಯ ಎದುರಿಸುತ್ತಿರುವ ಸವಾಲುಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.
ಸಂಶೋಧನೆಗಾಗಿ ವೃತ್ತಿಪರರನ್ನು ಗುರುತಿಸುವುದು, ಚಹಾ ಕಾರ್ಖಾನೆಗಳನ್ನು ಆಧುನೀಕರಿಸುವುದು ಮತ್ತು ಭಾರತೀಯ ಚಹಾ ಉತ್ಪಾದನೆಯು ಜಾಗತಿಕ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ನವೀಕರಣವನ್ನು ಕೈಗೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಬಲವಾದ ಬ್ರ್ಯಾಂಡ್ ಗಳ ಅಡಿಯಲ್ಲಿ ಭಾರತೀಯ ಚಹಾವನ್ನು ಮಾರಾಟ ಮಾಡಲು ಪಾಲುದಾರರು ಒಟ್ಟಾಗಿ ಏಕೀಕೃತವಾಗಿ ಒಗ್ಗೂಡಿ ಜೊತೆಯಲ್ಲಿ ಬರಬೇಕೆಂದು ಅವರು ಸೂಚಿಸಿದರು, ಇದು ಮಾರುಕಟ್ಟೆ ಸ್ಥಾನೀಕರಣ ಮತ್ತು ಆದಾಯ ಮತ್ತು ಬೆಲೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ತೋಟ ಕಾರ್ಮಿಕರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಅವರ ಕಲ್ಯಾಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ನೀಡಿದರು. ತೋಟ ಕಾರ್ಮಿಕರ ಕಲ್ಯಾಣವು ಉದ್ಯಮದ ಬೆಳವಣಿಗೆ ಮತ್ತು ಸುಸ್ಥಿರತೆಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. "ಉದ್ಯಮ ಕಲ್ಯಾಣ ಮತ್ತು ಕಾರ್ಮಿಕರ ಕಲ್ಯಾಣವು ಜೊತೆಜೊತೆಯಾಗಿ ಹೋಗಬೇಕು" ಎಂದು ಅವರು ಹೇಳಿದರು.