ಲಡಾಖ್ನ 28 ಸ್ಥಳಗಳಿಗೆ ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಯಲ್ಲಿ ಮಾನ್ಯತೆ
ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
ಕೇಂದ್ರ ಸರ್ಕಾರವು ಲಡಾಖ್ ಕೇಂದ್ರಾಡಳಿತ ಪ್ರದೇಶದೊಂದಿಗೆ ಸಮಾಲೋಚನೆ ನಡೆಸಿ, ಅಲ್ಲಿನ 28 ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯಗಳಿಗೆ ಸರ್ವೇ ಆಫ್ ಇಂಡಿಯಾ (SoI)ಯ ಅಧಿಕೃತ ನಕ್ಷೆಯಲ್ಲಿ ಪ್ರಮಾಣಿತ ಸ್ಥಳ ಮತ್ತು ವೈಶಿಷ್ಟ್ಯಗಳ ಹೆಸರುಗಳನ್ನು ಗುರುತಿಸಿ ಮಾನ್ಯತೆ ನೀಡಿದೆ.
ಲಡಾಖ್ನ ಅಧಿಕೃತ ನಕ್ಷೆಯಲ್ಲಿ ಈ ಸ್ಥಳಗಳನ್ನು ಔಪಚಾರಿಕವಾಗಿ ಗುರುತಿಸುವಿಕೆ ಅವು ಸಾರ್ವಜನಿಕರಲ್ಲಿ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ವೇ ಆಫ್ ಇಂಡಿಯಾ ನಕ್ಷೆಯಲ್ಲಿ ಗುರುತಿಸಲಾದ 28 ಸ್ಥಳಗಳು ಹಾಗೂ ವೈಶಿಷ್ಟ್ಯಗಳು ಹೀಗಿವೆ: ಅತಿಶ ಗಿರಿ (ಶಿಖರ), ಬ್ರಾಂಗ್ಸಾ (ಭೂ ಪ್ರದೇಶ), ಚಾಪ್ಚಿಂಗಲ್ ಪಾಸ್ (ಕಣಿವೆ ದಾಟು), ಕನಿಷ್ಕ ಶಿಖರ (ಶಿಖರ), ಕರುಣ್ ಪೀರ್ (ಪರ್ವತ), ಕುಕ್ಸೆಲ್ (ಭೂ ಪ್ರದೇಶ), ಮಾರ್ತಾಂಡ ಗಿರಿ (ಶಿಖರ), ಪರ್ಪಿಕ್ (ಹಿಮನದಿ), ಸ್ಕಾಮ್ರಿ ಹಿಮನದಿ (ಹಿಮನದಿ), ಶಾಚ್ಮಿರ್ಕ್ ಪಾಸ್ (ಕಣಿವೆ ದಾಟು), ಶ್ಕೋರ್ಗಾ ಕಣಿವೆ, ಜೊರಾವರ್ ಶಿಖರ, ದೇಹ್ರಾ ಕಂಪಾಸ್ (ಭೂ ಪ್ರದೇಶ), ಡ್ರಾಕ್ ಕಾರ್ಪೋ (ಪರ್ವತ), ಗೋಗ್ರಾ (ಭೂ ಪ್ರದೇಶ), ಜೋಲ್ಮೋರಿ (ಪರ್ವತ), ಕುಮಾರಾಯಣ ಪಾಯಿಂಟ್ (ಭೂ ಪ್ರದೇಶ), ಪಾಂಗ್ಲುಂಗ್ (ಭೂ ಪ್ರದೇಶ), ರಿಂಚೆನ್ ಜಾಂಗ್ಪೋ (ಶಿಖರ), ಸಾಕ್ಯಶ್ರೀ ಗಿರಿ (ಶಿಖರ), ಗುರು ರಿಂಪೋಚೆ (ಸರೋವರ), ಶಾಮಲ್ ಲುಂಗ್ಪಾ (ಭೂ ಪ್ರದೇಶ), ಯಾಂಗ್ಪಾ ನದಿ, ಹಾಟ್ ಸ್ಪ್ರಿಂಗ್ (ಜಲ ಪ್ರದೇಶ), ಮಾರ್ಪಾ ಲೋತ್ಸಾವಾ ರಿ (ಶಿಖರ), ಮಿಲಾರೆಪಾ ಕಾಂಗ್ರಿ (ಶಿಖರ), ಶಿವ ರಿ (ಶಿಖರ) ಹಾಗೂ ಮಹೇಶ್ವರ ರಿ (ಶಿಖರ).
ಉತ್ತರ ಭಾರತದ ಎತ್ತರದ ಪರ್ವತ ಪ್ರದೇಶದಲ್ಲಿರುವ ಲಡಾಖ್, ಪರ್ವತಮಯ ಭೂಪ್ರದೇಶ, ಟಿಬೆಟಿಯನ್ ಬೌದ್ಧ ಸಂಸ್ಕೃತಿ ಹಾಗೂ ವಿಶಿಷ್ಟ ಮರುಭೂಮಿ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಲಡಾಖ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಒಟ್ಟು ಉತ್ಪತ್ತಿಯಾಗುವ ಆದಾಯದ ಶೇ.60ಕ್ಕೂ ಹೆಚ್ಚು ಪಾಲನ್ನು ಹೊಂದಿದೆ. ಲೆಹ್ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 317 ಹೋಟೆಲ್ಗಳು, 691 ಅತಿಥಿಗೃಹಗಳು, 1,055 ಹೋಂಸ್ಟೇಗಳು ಹಾಗೂ 105 ಕ್ಯಾಂಪ್ಗಳು ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸುತ್ತಿವೆ.